ಕರ್ಪೂರಾರುತಿ ಬೆಳಗಿರೆ ಕಾರುಣ್ಯ ಮೃಡಹರ ದೇವಗೆ [Karpuraruthi Belagire Karunya Mrudahara Devage] - ಮಂಗಳಾರತಿ ಪದ

ಕರ್ಪೂರಾರುತಿ ಬೆಳಗಿರೆ
ಕಾರುಣ್ಯ ಮೃಡಹರ ದೇವಗೆ || ಪ ||
ನೀಲಕಂಠದರ ನಿಗಮ ಗೋಚರ
ಬಾಲಚಂದ್ರಾಭರಣಗೆ
ಬಾಲೆಗೊಲಿದನು ಹಾಲು ಸವಿದನು
ಲೋಲ ಶ್ರೀಗುರು ರಾಯಗೆ || 1 ||
ವಾರಿಜೋದ್ಭವ ಶಿರವ ಹರಿದಿಹ
ಮಾರ ಹರ ಮಹಾದೇವಗೆ
ಘೋರ ದುರಿತವ ದೂರ ಮಾಡಿದ
ಶೂರ ಷಣ್ಮುಖನಯ್ಯಗೆ || 2||
ಶರಣ ಜನಕೆ ವರವನಿತ್ಥಿಹ
ಪರಮ ಪಾರ್ವತಿ ಅರಸಗೆ
ಧರೆಯೊಳಿರುವಂತ ಸೊನ್ನಲಪುರದ ಸಿದ್ಧರಾಮ ಶಿವಯೋಗಿಗೆ || 3 ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ