ಅಂಬಾಗಾರತಿಯನ್ನು ದೇವಿಗಾರತಿಯನ್ನು ರಂಬೇರು ಬೆಳಗಿರೆ [ Ambagaratiyannu devigaratiyannu ramberu belagire ] - ಮಂಗಳಾರತಿ ಪದ

ಅಂಬಾಗಾರತಿಯನ್ನು ದೇವಿಗಾರತಿಯನ್ನು ರಂಬೇರು ಬೆಳಗಿರೆ
ಅಂಬಾಗಾರತಿಯನ್ನು ದೇವಿಗಾರತಿಯನ್ನು ರಂಬೇರು ಬೆಳಗಿರೆ
ಶುಂಬಾ ನಿಶುಂಭರ ಸಂಹಾರಿಗೆ ಶಂಕರಿಗೆ || ಪ ||

ಕುಂಬಕುಚ ಜಗದಂಬೆ ನಿನ್ನ ಪಾದ
ನಂಬಿಕೊಂಡೆನು ನರಶರೀರದಿ
ಅಂಬುಕೇಶನ ರಾಣಿ ಶರಣರ
ಬಿಂಬದೊಳು ನಲಿದಾಡು ಜನನಿಗೆ || ಪ ||

ಕೆಟ್ಟ ದ್ಯೆತ್ಯರನೆಲ್ಲ ಕೆಟ್ಟ ದ್ಯೆತ್ಯರನೆಲ್ಲ ಮೆಟ್ಟಿ ಕುತ್ತಗೆ ಕೊಯ್ದು
ಸುಟ್ಟು ತ್ರಿಪುರಗೆದ್ದ ಶ್ರೀಕಾಂತೆಗೆ ಶಂಕರಿಗೆ

ಬ್ರಷ್ಟಮಹಿಷನ ಹೊಟ್ಟೆ ಬಗೆದು
ಬೆಟ್ಟ ಕೊಳ್ಳಕೆ ಇಳಿದ ರೇಣುಕೆ
ಸೃಷ್ಟಿಯೊಳು ಪಟ್ಟದ ಬ್ರಹ್ಮನ
ಶಿರವನ್ಹರಿಸಿದ ಪರಮಪಾರ್ವತಿಗೆ || ೧ ||

ಹಿಂಡ ರಕ್ಕಸರನ್ನು ಹಿಂಡ ರಕ್ಕಸರನ್ನು ಚಂಡಾಡಿ ಕೊರಳೊಳು
ರುಂಡಮಾಲೆಯ ಧರಿಸಿದ ಚಾಮುಂಡಿಗೆ ಶಂಕರಿಗೆ

ಮಂಡಲದಿ ಮೆರೆವಂಥ ಭಂಡರ
ತುಂಡುಮಾಡಿದ ಅಖಂಡ ದೇವತೆ
ಕುಂತಳೇ ಶಿಶುನಾಳಧೀಶನ
ಕಂಡೆ ನಿನ್ನಯ ಪಾದನೇತ್ರದಿ || ೨ ||

ಕಾಮೆಂಟ್‌ಗಳು