ದೇವಿ ಬಂದಳೇ ಶ್ರೀದೇವಿ ಬಂದಳೇ [ Devi bandale Sridevi bandale ] - ಮಂಗಳಾರತಿ ಪದ

ದೇವಿ ಬಂದಳೇ ಶ್ರೀದೇವಿ ಬಂದಳೇ
ಚೌರಿ ರಾಗಟಿ ಹಾಕಿದ ಚೆಲುವೆ ಬಂದಳೇ ||

ಬುಗುಡಿ ಮೂಗುತಿ ಇಟ್ಟ ಸುಗುಣಿ ಹರಿಸತೀ
ವಾರಿಜಾ ಮುಖಿ ರಥವನೇರಿ ಬಂದಳೆ ||

ಸ್ನಾನ ಮಾಡಿರಿ ದೇವಿ ಪೂಜೆ ಮಾಡಿರಿ
ದೇವಿ ಮುಂದೆ ನಿಂತುಕೊಂಡು ವರವ ಬೇಡಿರಿ ||

ಸೀರೆ ಉಟ್ಟಳೆ ಒಳ್ಳೆ ಬಳೆಯ ತೊಟ್ಟಳೆ
ಮಗುವನೆತ್ತಿಕೊಂಡು ತಾ ನಗುತ ಬಂದಳೇ ||

ಕಡಗ ಕಂಕಣ ಋಳಿ ಗೆಜ್ಜೆ ಪೈಝಣ
ಘಲು ಘಲು ಎನುತ ತಾ ಕುಣಿದು ಬಂದಳೇ ||

ರಂಗವಿಠಲನಾ ಅರಸಿ ಶೃಂಗಾರದಿಂದಲೀ
ಬಂದು ನೆಲೆಸಿಹಾ ಭಕ್ತರ ಹೃದಯ ಕಮಲದಿ ||

ಕಾಮೆಂಟ್‌ಗಳು