ಜ್ಞಾನಪೂರ್ಣಂ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ || ಪ ||
ಅನುದಿನ ಗುರುವಿನ ಅನುಗೂಡಿ ಭಕ್ತಿಯಲಿ
ಜನನ ಮರಣ ರಹಿತ ಜಂಗಮಕೆ ಬೆಳಗಿರೆ || ಅ.ಪ ||
ನಾನೀನೆಂಬುದ ಬಿಡಿರಿ ಸದ್ಗುರು ಪ್ರಾಪ್ತಿ
ಜ್ಞಾನಿಗಳೊಡನಾಡಿರಿ
ಸ್ವಾನುಭವದ ಸುಖ ತಾನೆ ಕೈಸೇರುವುದು
ಅನುಭವಿಸಿ ಲಿಂಗಕ್ಕೆ ಮನವೊಪ್ಪಿ ಸಿ ಬೆಳಗಿರಿ || ಪ ||
ನಾನಾ ಜನ್ಮದ ಕತ್ತಲೆ ಕಳೆದುಳಿದು ಬೇಗ
ಮಾನವ ಜನ್ಮದ ಬೆಳಕಲ್ಲಿ
ಹೀನವಿಷಯದಾಸೆ ಹಿಂದುಳಿದು ಗುರುವಿನ
ಧ್ಯಾನವೇ ಗತಿಯೆಂದು ಮನವೊಪ್ಪಿ ಬೆಳಗಿರೆ || ಪ ||
ಅಷ್ಟವರ್ಣದ ಸ್ಫೂಲವು ಮಾನವ ಜನ್ನ
ಹುಟ್ಟಿ ಬರುವುದು ದುರ್ಲಭವು
ಕೊಟ್ಟಾನೊ ಶಿವ ಎಮಗೆ ಮಾಡಿದ ಫಲದಿಂದ
ಹುಟ್ಟಿದ ಮಗನೆಸರು ಶಿವನೆಂದು ಕರೆಯಿರಿ || ಪ ||
ಹುಟ್ಟಿ ಬರುವುದು ದುರ್ಲಭವು
ಕೊಟ್ಟಾನೊ ಶಿವ ಎಮಗೆ ಮಾಡಿದ ಫಲದಿಂದ
ಹುಟ್ಟಿದ ಮಗನೆಸರು ಶಿವನೆಂದು ಕರೆಯಿರಿ || ಪ ||

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ